ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯಿಂದ ಸ್ಪಂದನ ವಿಶೇಷ ಮಕ್ಕಳ ಶಾಲೆಗೆ ಭೇಟಿ

ಉಡುಪಿ: ಉಡುಪಿಯ ಕೊಳಗಿರಿಯಲ್ಲಿ ಕಾರ್ಯಚರಿಸುತ್ತಿರುವ ಸ್ಪಂದನ ವಿಶೇಷ ಮಕ್ಕಳ ಶಾಲೆಗೆ ಮಾ.31 ರಂದು ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯ ಪ್ರಾಂಶುಪಾಲೆ, ಪ್ರಶಿಕ್ಷಣಾರ್ಥಿ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿದರು. ಅಲ್ಲಿನ ಮಕ್ಕಳಿಗೆ ಕ್ರಾಪ್ಟ್ ಹಾಗೂ ಮಾಂಟೆಸ್ಸರಿ ಸಲಕರಣೆಗಳ ಪ್ರಾತಿಕ್ಷಿತೆ ನೀಡಿದರು. ಈ ಸಂದರ್ಭದಲ್ಲಿ ಸ್ಪಂದನ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಜನಾರ್ಧನ್, ಟ್ರಸ್ಟಿಗಳಾದ ಶ್ರೀಯುತ ಉಮೇಶ್ ಹಾಗೂ ವಿವೇಕ್ ಕಾಮತ್‍ರವರು ಉಪಸ್ಥಿತರಿದ್ದರು.