ಪೇಜಾವರ ಶ್ರೀಗಳಿಂದ ಯೋಗಿ ಆದಿತ್ಯನಾಥ್ ಭೇಟಿ‌; ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ

ಉತ್ತರಪ್ರದೇಶ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು ಸಂಜೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು. ಸಿಎಂ ಯೋಗಿಯವರು ಶ್ರೀಗಳನ್ನು ಆದರಪೂರ್ವಕ ಬರಮಾಡಿಕೊಂಡರು . ಉಭಯ ಕುಶಲೋಪರಿಯ ಬಳಿಕ ಕೊರೊನಾ ವಿಪತ್ತಿನ ಕುರಿತು ವಿಷಯ ಮಾತನಾಡಿ ಲೋಕದೊಳಿತಿಗಾಗಿ ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುವಂತೆ ಯೋಗಿಯವರು ಶ್ರೀಗಳವರಲ್ಲಿ ವಿನಂತಿಸಿದರು. ಬಳಿಕ ಶ್ರೀರಾಮಮಂದಿರ ನಿರ್ಮಾಣದ ವಿಷಯದ ಬಗ್ಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಅಧ್ಯಕ್ಷರು ಮಹಾಂತ ನೃತ್ಯ ಗೋಪಾಲ ದಾಸ್ […]