ಮಂದಿರ‌ ನಿರ್ಮಾಣ ಕೇವಲ ‌ಕನಸಲ್ಲ: ಅಸಂಖ್ಯಾತ ಹಿಂದೂಗಳ ಹೋರಾಟ ಬಲಿದಾನವಿದೆ: ವಿಶ್ವಪ್ರಸನ್ನ ಶ್ರೀ

ಉಡುಪಿ: ಭಾರತ ದೇಶದ ಸಂಸ್ಕೃತಿಯ ಅಡಿಗಲ್ಲು ಆಗಿದ್ದ ರಾಮಮಂದಿರದ ಪುನರ್ ನಿರ್ಮಾಣ ಆಗಬೇಕೆನ್ನುವುದು ಶತಶತಮಾನಗಳ ಕನಸು. ರಾಮಮಂದಿರ ನಿರ್ಮಾಣ ಕೇವಲ ಕನಸು ಮಾತ್ರವಲ್ಲ, ಅದರ ಹಿಂದೆ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನವಿದೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟಿಯು ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಸೋಮವಾರ ವಿಡಿಯೋ ಹೇಳಿಕೆ ಮೂಲಕ ಸಂದೇಶ ನೀಡಿದ ಶ್ರೀಗಳು, ರಾಮಾಯಣ ಹಾಗೂ ಮಹಾಭಾರತ ನಮ್ಮ ದೇಶದ ಸಂಸ್ಕೃತಿಯ ಮೂಲ ಬೇರುಗಳು. ನಮ್ಮಲ್ಲಿರುವ ಸನಾತನ ಸಂಸ್ಕೃತಿ, ಪರಂಪರೆಯಿಂದಾಗಿ ಭಾರತ ದೇಶಕ್ಕೆ […]