ವಿಶ್ವಶಾಂತಿಯ ಪಯಣ ಶೀರ್ಷಿಕೆಯಡಿ ಚಿತ್ರಕಲಾ ಸ್ಪರ್ಧೆ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಜಿಲ್ಲಾ 317ಸಿ ಲಿಯೋ ಕ್ಲಬ್ ಸಹಯೋಗದಲ್ಲಿ ಬ್ರಹ್ಮಗಿರಿಯ ಬಾಲಭವನದಲ್ಲಿ ‘ವಿಶ್ವಶಾಂತಿಯ ಪಯಣ’ ಶೀರ್ಷಿಕೆಯೊಂದಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸುಮಾರು 60ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲಾವಣ್ಯ ಯು. ರಾವ್, ದ್ವಿತೀಯ ಸ್ಥಾನ ಗಳಿಸಿದ ಪ್ರಾಪ್ತಿ ಪ್ರದೀಪ್ ಹಾಗೂ ತೃತೀಯ ಸ್ಥಾನ ಪಡೆದ ಕೆ. ಪ್ರತಿಷ್ಠಾ ಅವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ 317 ಸಿ ಲಿಯೋ ಅಧ್ಯಕ್ಷ ಫೌಜನ್ ಅಕ್ರಂ ಮಾತನಾಡಿ ಮಕ್ಕಳಿಗೆ ಶುಭಹಾರೈಸಿದರು. […]