ಸಮಾಜಸೇವಕ ವಿಶು ಶೆಟ್ಟಿಯವರಿಂದ 42 ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಜನರಿಗೆ ಊಟ ವಿತರಣೆ

ಉಡುಪಿ: ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ, ಊಟ ಮತ್ತು ಉಪಹಾರಗಳನ್ನು ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ವಿತರಿಸುತ್ತಿದ್ದರು. ಮಾ,23 ರಿಂದ ಪ್ರಾರಂಭಗೊಂಡ ಹಸಿದವರಿಗೆ ಉದರ ತಣಿಸುವ ಅವರ ಪರಮಸೇವೆಯು ಮೇ 3 ವರೆಗೆ ನಡೆದು, ಸಮಾಪನ ಪಡೆಯಿತು. ಜಿಲ್ಲೆಯಲ್ಲಿ ಪ್ರಥಮವಾಗಿ ಜನ ಸಾಮನ್ಯನೊರ್ವನು ಏಕ ವ್ಯಕ್ತಿಯಾಗಿ ಸ್ವಂತ ಖರ್ಚಿನಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಊಟ ವಿತರಿಸಿದ ಸೇವಾಕಾರ್ಯು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ […]