ಪರೀಕ್ಷೆಯನ್ನು ಹಬ್ಬದಂತೆ ಎದುರು ನೋಡಿ: ಡಾ ವಿರೂಪಾಕ್ಷ ದೇವರಮನೆ

ಕಾರ್ಕಳ: ಪರೀಕ್ಷೆ ಎನ್ನುವ ಭಯವನ್ನು ದೂರ ಮಾಡಿಕೊಂಡು ಹಬ್ಬಗಳನ್ನು ಎದುರು ನೋಡುವಂತೆ ಪರೀಕ್ಷೆಗೆ ಕಾತುರದಿಂದ ಕಾಯಬೇಕು. ಪರೀಕ್ಷೆಯೆಂಬ ಒತ್ತಡವನ್ನು ಮೊದಲು ಮನಸ್ಸಿನಿಂದ ತೆಗೆದುಹಾಕಬೇಕು. ಪರೀಕ್ಷಾ ತಯಾರಿಯನ್ನು ಇಷ್ಟಪಟ್ಟು ಮಾಡಬೇಕೇ ಹೊರತು ಅದು ಕಷ್ಟದ ಕೆಲಸ ಎಂಬ ಮನೋಭಾವನೆಯಿಂದ ಮಾಡಬಾರದು ಎಂದು ಖ್ಯಾತ ಮನೋತಜ್ಞರಾದ ಡಾ ವಿರೂಪಾಕ್ಷ ದೇವರಮನೆ ಹೇಳಿದರು. ಇವರು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು ಹಾಗೂ ಕಾರ್ಕಳ ರೋಟರಿ ಕ್ಲಬ್ ಇದರ ಸಹಯೋಗದೊಂದಿಗೆ ಪಿಯು ವಿದ್ಯಾರ್ಥಿಗಳಿಗೆ ನಡೆದ ಹ್ಯಾಪಿ ಎಕ್ಸಾಂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ […]