ಗ್ರಾಮಾಭಿವೃದ್ದಿಯ ಹರಿಕಾರ ಧರ್ಮದರ್ಶಿ “ಶ್ರೀ ವೀರೇಂದ್ರ ಹೆಗ್ಗಡೆ”ಯವರಿಗೆ ರಾಜ್ಯಸಭೆ ನಾಮಾಂಕನದ ಗೌರವ

ನವೆಂಬರ್ 25, 1948 ರಂದು ಪ್ರಕೃತಿಯ ಒಡಲಲ್ಲಿ ಧರ್ಮದೇವತೆ ಶ್ರೀ ಮಂಜುನಾಥ ನೆಲೆಯಾದ ಪವಿತ್ರ ಭೂಮಿಯಲ್ಲಿ ಜನನ. ಕಡು ಕುಗ್ರಾಮವಾದ ಹಳ್ಳಿಯಲ್ಲಿ ಸೌಕರ್ಯಗಳೇ ಇಲ್ಲದಿದ್ದ ಕಾಲವದು. ಕುಡುಮ ಎಂಬ ಪುಟ್ಟ ಹಳ್ಳಿಯನ್ನು ಧರ್ಮಸ್ಥಳವಾಗಿಸಿ ದೇಶ ವಿದೇಶದ ಭಕ್ತ ಸಾಗರ ಶ್ರೀ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ ಕೀರ್ತಿ ಶ್ರೀಯುತ ವೀರೇಂದ್ರ ಹೆಗ್ಗಡಿಯವರಿಗಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ತಂದೆ ರತ್ನವರ್ಮ ಹೆಗ್ಗಡೆಯವರು ನಿಧನರಾದಾಗ ವೀರೇಂದ್ರ ಹೆಗ್ಗಡೆಯವರು ಇನ್ನೂ ಹದಿಹರೆಯದ ಹುಡುಗ. ಎಳವೆಯಲ್ಲೇ ಕ್ಷೇತ್ರದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಇವರು […]