ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಗ್ರಾಮಸ್ಥರಿಂದ ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ: ಬ್ರಹ್ಮಾವರ ಬಿಲ್ಲಾಡಿ ಗ್ರಾಮದ ನೈಲಾಡಿ ಕದ್ರಂಜೆಯ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಗುರುವಾರ ಗ್ರಾಮಸ್ಥರಿಂದ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಪ್ರಾಯಶ್ಚಿತ್ತ ಹೋಮ ಹವನ ಕಲಶಾಭಿಷೇಕಗಳಂತಹ ಧಾರ್ಮಿಕ ವಿಧಿವಿಧಾನಗಳನ್ನು ವೈದಿಕರು ನೆರವೇರಿಸಿದರು. ಬಳಿಕ ಸರ್ವಾಪರಾಧ ಪ್ರಾಯಶ್ಚಿತ್ತಕ್ಕಾಗಿ ಮತ್ತು ರುದ್ರ ಸನ್ನಿಧಿಯ ಉತ್ಥಾನಕ್ಕಾಗಿ ಪೂರ್ಣಶ್ರದ್ಧೆ, ಪೂರ್ಣ ತನುಮನಧನ ಸಹಿತ ಒಗ್ಗಟ್ಟಿನಿಂದ ದೇವಳ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಸಂಕೇತವಾಗಿ ಮುಷ್ಟಿ ಕಾಣಿಕೆ ಸಲ್ಲಿಸುವ ವಿಧಿಯನ್ನು ನೆರವೇರಿಸಲಾಯಿತು. ಮಹಾಲಿಂಗೇಶ್ವರನ ಮುಂಭಾಗದಲ್ಲಿ ಇಟ್ಟ ದೊಡ್ಡ ಪಾತ್ರೆಗೆ ಸಮಸ್ತ ಗ್ರಾಮಸ್ಥರು […]