ವಂಡ್ಸೆ: ಕೆಸರು ಗದ್ದೆಯಂತೆ ಆದ ರಸ್ತೆ; ಗ್ರಾಮಸ್ಥರ ಗೋಳು ಕೇಳುವವರಿಲ್ಲ.!

ವಂಡ್ಸೆ: ಕೆಸರು ಗದ್ದೆಯಂತೆ ಆದ ರಸ್ತೆ. ಈ‌ ರಸ್ತೆಯಲ್ಲಿ ಬಂದ್ರೆ ಕಾಲು ಹೂತು ಹೋಗುವುದಂತೂ ಗ್ಯಾರಂಟಿ. ನಿತ್ಯ ಕೆಸರು ತುಂಬಿಕೊಂಡಿರುವ ರಸ್ತೆಯಲ್ಲೇ ಓಡಾಡಬೇಕಾದ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದ್ದು. ಹೌದು, ಇದು ವಂಡ್ಸೆ ಪೇಟೆಯ ಅನತಿ ದೂರದಲ್ಲಿರುವ ಕಾನಮ್ಮ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಅಡಿಕೆಕೋಡ್ಲು ಸಂಧಿಸುವ ರಸ್ತೆಯ ದುಸ್ಥಿತಿ. ಈ ಸಮಸ್ಯೆ ಇಂದು ಮೊನ್ನೆಯದಲ್ಲ, ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಜನರು ಅನುಭವಿಸುತ್ತಿರುವ ತೊಂದರೆ. ಆದ್ರೆ ಈ ಸಮಸ್ಯೆಗೆ ಈವರೆಗೂ‌ ಮುಕ್ತಿ ಸಿಕ್ಕಿಲ್ಲ. ಅಂದಹಾಗೆ ಇದು ಪಂಚಾಯತ್ ಅಧ್ಯಕ್ಷರ […]