ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ಪ್ರಾಚೀನ ದಶಾವತಾರ ದ್ವಾರಬಂಧ ಪತ್ತೆ

ಉಡುಪಿ: ಜಿಲ್ಲೆಯ ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ಶಿಲ್ಪ ಪಟ್ಟಿಕೆಯ ದ್ವಾರಬಂಧ ಕಂಡು ಬಂದಿದೆ ಎಂದು ನಿವೃತ್ತ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಆದಿಮ ಕಲಾ ಟ್ರಸ್ಟ್ (ರಿ.), ಉಡುಪಿ ಇದರ ಸ್ಥಾಪಕಸದಸ್ಯ ಪ್ರೊ. ಟಿ. ಮುರುಗೇಶಿ ಅವರು ತಿಳಿಸಿದ್ದಾರೆ. ಈ ಕಂಚಿನ ದ್ವಾರಬಂಧವು ಸುಮಾರು 4.5 ಅಡಿ ಎತ್ತರ ಮತ್ತು 3.5 ಅಡಿ ಅಗಲವಾಗಿದೆ. ಅಡ್ಡ ಪಟ್ಟಿಕೆಯ ಮೇಲೆ ಗಜಲಕ್ಷ್ಮಿಯ ಲಲಾಟ ಬಿಂಬವಿದೆ. ಎಡ-ಬಲದ ಲಂಭ ಪಟ್ಟಿಕೆಗಳ […]