ವೇಣೂರು: ಫಲ್ಗುಣಿ‌ ನದಿಯಲ್ಲಿ ಮೃತದೇಹ ಪತ್ತೆ

ವೇಣೂರು, ಜೂ. 26: ಬೆಳ್ತಂಗಡಿ ತಾಲೂಕಿನ ವೇಣೂರು ಪಲ್ಗುಣಿ ನದಿ ಸಮೀಪದಲ್ಲಿ ಅನುಮಾನಸ್ಪದವಾಗಿ ವ್ಯಕ್ತಿಯ ಮೃತ ದೇಹ ಬುಧವಾರ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಗುಣಪಾಲ್ (೬೦) ಎಂದು ಗುರುತಿಸಲಾಗಿದೆ. ಮೃತ ಗುಣಪಾಲ್ ಈ ಹಿಂದೆ ಸ್ಥಳೀಯ ಪಾರ್ಶ್ವನಾಥ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು ಸ್ಥಳೀಯರಿಗೆ ಚಿರಪರಿಚಿತರಾಗಿದ್ದರು. ಇಂದು ಬೆಳಿಗ್ಗೆ ಶವ ನದಿಯಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸ್ಥಳೀಯರ ಮಾಹಿತಿಯಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.