ಪ್ರಶಸ್ತಿ ಮೊತ್ತವನ್ನು ಮಡಿದ ಸೈನಿಕರ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದ ವೆಂಕಟರಮಣ ಪಿತ್ರೋಡಿ

ಉಡುಪಿ : 17.2.2019 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಅಂಗಳದಲ್ಲಿ ಜರುಗಿದ 40 ವರ್ಷಕ್ಕಿಂತ ಮೇಲ್ಪಟ್ಟ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ ಸೌತ್ ಸ್ಟಾರ್ ಟ್ರೋಫಿಯನ್ನು ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ)ಪಡೆಯಿತು.ಈ ಪಂದ್ಯಾಕೂಟದಲ್ಲಿ 90 ರ ದಶಕದ ಶ್ರೇಷ್ಠ ತಂಡಗಳಾದ ಪಡುಬಿದ್ರಿ ಫ್ರೆಂಡ್ಸ್, ವೆಂಕಟರಮಣ ಪಿತ್ರೋಡಿ, ನೇತಾಜಿ ಸ್ಪೋರ್ಟ್ಸ್ ಕ್ಲಬ್,ಕೋಸ್ಟಲ್ ಮಲ್ಪೆ,ಸೌತ್ ಸ್ಟಾರ್ ಅಂಬಲಪಾಡಿ,ಕುತ್ಪಾಡಿ ಫ್ರೆಂಡ್ಸ್ ಹಾಗೂ ಮಿಷನ್ ಕಂಪೌಂಡ್ ಉಡುಪಿ ಸಹಿತ 7 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಮೊದಲು ಬ್ಯಾಟಿಂಗ್ ಮಾಡಿ ಸತೀಶ್.ಜಿ ಮಲ್ಪೆ ಯವರ ಅಬ್ಬರದ […]