ತರಾತುರಿಯಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ: ಪ್ರಶಸ್ತಿ ಹಿಂದಿರುಗಿಸಲು ಬನ್ನಾಡಿ ನಿರ್ಧಾರ

ಕುಂದಾಪುರ: ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳು ಹಾಗೂ ಕೇಂದ್ರ ಸರ್ಕಾರವು ತರಾತುರಿಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ ವಿರೋಧಿಸಿ ತಮಗೆ ಬಂದಿರುವ ನಾಟಕ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸುವುದಾಗಿ ಹಿರಿಯ ರಂಗಕರ್ಮಿ ಪ್ರೊ.ವಸಂತ ಬನ್ನಾಡಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು udupi xpress ಜೊತೆ ಮಾತನಾಡಿದ ಅವರು, ಗೌರಿ ಲಂಕೇಶ ಹಾಗೂ ಕಲ್ಬುರ್ಗಿಯವರ ಹತ್ಯೆಯಾದ ಸಂದರ್ಭದಲ್ಲಿ ಪ್ರಶಸ್ತಿ ಹಿಂತಿರುಗಿಸುವ ಕೂಗು ಬಂದಾಗಲು ಸಹನೆಯಿಂದ ಕಾದಿದ್ದೆ. ಇದೀಗ ದೇಶದಲ್ಲಿ ಹೆಚ್ಚಾಗುತ್ತಿರುವ ಪ್ರಜಾಸತ್ತಾತ್ಮಕ […]