ಸೌಜನ್ಯ ಪ್ರಕರಣ ಹಳಿ ತಪ್ಪಿಸಿದವರು ಯಾರೆಂದು ಬಲ್ಲೆ; ರಹಸ್ಯ ಬಿಚ್ಚಿಟ್ಟರೆ ಸಾಯಿಸಬಹುದು: ವಸಂತ ಬಂಗೇರ

ಬೆಳ್ತಂಗಡಿ: ಸೌಜನ್ಯ ಪ್ರಕರಣದ ರಹಸ್ಯ ಬಿಚ್ಚಿಟ್ಟರೆ ನನ್ನನ್ನು ಸಾಯಿಸಬಹುದು. ಆದರೆ ಆ ರಹಸ್ಯವನ್ನು ಸಾಯುವ ಮುನ್ನ ನಾನು ಹೇಳದೇ ಬಿಡುವುದಿಲ್ಲ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯ ಸೌಜನ್ಯ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲಾಗಿದ್ದು ಇದರ ಹಿಂದೆ ಇರುವವರು ಯಾರೆಂದು ನನಗೆ ಗೊತ್ತಿದೆ ಎಂದರು. ನಾನು ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಸೌಜನ್ಯಾ ಕೇಸ್ ಅನ್ನು ಸಿಬಿಐಗೆ ವಹಿಸಲು ಆಗ್ರಹಿಸಿದ್ದೆ. ಸಿದ್ದರಾಮಯ್ಯನವರು ಕೆಲವರನ್ನ ತುಂಬಾ ಒಳ್ಳೆಯವರು ಎಂದು ನಂಬಿದ್ದರು. ಅಧಿವೇಶನಕ್ಕೂ ಮುನ್ನ […]