ಚಂದ್ರಯಾನ–3ರ ಕೌಂಟ್‌ಡೌನ್ ಧ್ವನಿ ಇನ್ನಿಲ್ಲ

ಬೆಂಗಳೂರು: ಚಂದ್ರಯಾನ-3 ಉಪಗ್ರಹ ಉಡಾವಣೆಯ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೀಹರಿಕೋಟಾದಿಂದ ಚಂದ್ರಯಾನ 3 ಉಡಾವಣೆಗೂ ಮುನ್ನಿನ ಕೌಂಟ್ ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನರಾಗಿದ್ದಾರೆ. ಮೂಲತಃ ತಮಿಳುನಾಡಿನ ಅರಿಯಾಲೂರ್‌ನವರಾದ ಇವರು ಶನಿವಾರ ಮೃತಪಟ್ಟಿದ್ದಾರೆ. 31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ […]