ಮಾ.24 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಮಾರ್ಚ್ 24 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/33/11 ಕೆ.ವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಲ್ಲಿ 110 ಕೆ.ವಿ ಬಸ್ ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕ ನಿರ್ವಹಣೆಯ ಕಾಮಗಾರಿ ಹಮ್ಮಿಕೊಂಡಿರುವುದರಿಂದ 33 ಕೆ.ವಿ ಹೆಬ್ರಿ ಫೀಡರಿನಲ್ಲಿ ವಿದ್ಯುತ್ ಅಡಚಣೆಯಾಗುವುದರಿಂದ 33/11 ಕೆ.ವಿ ಹೆಬ್ರಿ ಉಪ ಕೇಂದ್ರದಿಂದ ಸರಬರಾಜಾಗುವ ಬೇಳೆಂಜೆ, ಕಳ್ತೂರು, ಸಂತೆಕಟ್ಟೆ, ಕರ್ಜೆ, ಮುಂಡಾಡಿಜೆಡ್ಡು, ಕುರ್ಪಾಡಿ, […]