ವಂಡ್ಸೆ ಮಾತೃಭೂಮಿ ಯುವ ಸಂಘಟನೆ ವಾರ್ಷಿಕೋತ್ಸವ

ಕುಂದಾಪುರ;  ಗ್ರಾಮೀಣ ಭಾಗದಲ್ಲಿ ಯುವ ಜನತೆಯ ಒಗ್ಗೂಡುವಿಕೆ ಗ್ರಾಮದ ಬೆಳವಣಿಗೆಯಲ್ಲಿ ಪೂರಕವಾಗುತ್ತದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಯುವ ಜನತೆ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಗ್ರಾಮದ ಪ್ರಗತಿಯ ಬಗ್ಗೆ ಚಿಂತನೆ ನಡೆಸಬೇಕು. ಸೇವಾ ಕಾರ್ಯಗಳ ಮೂಲಕ ಸಮಾಜಮುಖಿಯಾಗಿರಬೇಕು. ಆ ಹಿನ್ನೆಲೆಯಲ್ಲಿ ಆತ್ರಾಡಿಯ ಈ ಸಂಘಟನೆ ಸೇವೆಯ ಮಾರ್ಗದಲ್ಲಿ ಸಾಗುತ್ತಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ವಂಡ್ಸೆ ಆತ್ರಾಡಿಯ ಶ್ರೀ ಬ್ರಹ್ಮಲಿಂಗೇಶ್ವರ ದೇವಾಸ್ಥಾನ ವಠಾರದಲ್ಲಿ ನಡೆದ ಮಾತೃಭೂಮಿ ಯುವ ಸಂಘಟನೆ ಆತ್ರಾಡಿ ಇದರ […]