ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ವಿ.ಸುನಿಲ್ ಕುಮಾರ್ ಅವರನ್ನು ಜೋಡುರಸ್ತೆಯಲ್ಲಿ ಅದ್ದೂರಿಯ ಸ್ವಾಗತ..

ಕಾರ್ಕಳ: ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ವಿ.ಸುನೀಲ್ ಕುಮಾರ್ ಅವರು ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕಾರ್ಕಳ ಕೇಂದ್ರ ಭಾಗಕ್ಕೆ ಪಾದಸ್ವರ್ಶ ಗೈಯುತ್ತಿದ್ದಂತೆ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಮುಂಭಾಗದಲ್ಲಿ ಕಾರ್ಕಳದ ಜನತೆ ಅವರನ್ನು ಅದ್ದೂರಿಯ ಸ್ವಾಗತ ಮಾಡಲಾಯಿತು. ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯ ಪಾಲುದಾರರಾದ ರವಿಪ್ರಕಾಶ್ ಹಾಗೂ ಕಿರಣ ರವಿಪ್ರಕಾಶ್ ಪ್ರಭು ಮತ್ತು ಪ್ರಜ್ವಲ್ ಪ್ರಭು ಇವರು ಆತ್ಮೀಯವಾಗಿ ಶಾಸಕ ಸುನೀಲ್ ಕುಮಾರ್ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಶುದ್ಧ ರೇಷ್ಮೆ ಶಾಲು ಹೊದಿಸಿ, ಹೂಮಾಲೆಯನ್ನು […]