ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಅರ್ಚಕರಿಗೆ ಹಲ್ಲೆ,  ತನಿಖೆಗೆ ವಿಹಿಂಪ ಆಗ್ರಹ 

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಠದ ಅರ್ಚಕರಿಗೆ ಹಲ್ಲೆ‌ ಪ್ರಕರಣ ಇಡೀ ಹಿಂದೂ ಸಮಾಜಕ್ಕೆ ನೋವು ತಂದಿದೆ. ಈ ಘಟನೆಯಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದ್ದು, ಘಟನೆಯನ್ನು ಜಿಲ್ಲಾಧಿಕಾರಿ ಅವರು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು‌ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಅರ್ಚಕ‌ ಶ್ರೀ ಕುಮಾರ್ ಬನ್ನಿಂತಾಯ ಅವರ ಹಲ್ಲೆಗೆ ಸಂಬಂಧಿಸಿದಂತೆ ಅಲ್ಲಿ ಕೆಲವು ರಾಜಕೀಯ ನಡೆಯುತ್ತಿದೆ. ಇಂತಹ ಕೃತ್ಯ ದೇವಸ್ಥಾನದಲ್ಲಿ ನಡೆಯಬಾರದು. ದೇವಸ್ಥಾನದ ಕಚೇರಿಯಲ್ಲಿ […]