ಅನೈತಿಕ ಸಂಬಂಧ: ಪತ್ನಿಯನ್ನು ಕೊಂದು ಮನೆ ಬೆಡ್ರೂಮ್’ನ ಕೆಳಗೆ ಶವ ಹೂತ ಪತಿ!

ಉತ್ತರ ಪ್ರದೇಶ: ಬಹ್ರೈಚ್ ಜಿಲ್ಲೆಯಲ್ಲಿ ಅನೈತಿಕ ಸಂಬಂಧ(Immoral relationship) ಹಿನ್ನೆಲೆ ತನ್ನ ಪತ್ನಿ ಇನ್ನೊಬ್ಬರ ಜೊತೆ ಖಾಸಗಿ ಕ್ಷಣದಲ್ಲಿ ಇರೋದನ್ನು ನೋಡಿದ ಪತಿ, ಆಕೆಯನ್ನು ಕೊಂದು ಮನೆಯ ಬೆಡ್​ರೂಂನಲ್ಲಿಯೇ ಶವ ಹೂತು, ಅದರ ಮೇಲೆಯೇ 12 ದಿನ ಮಲಗಿದ್ದಾನೆ. ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು 48 ವರ್ಷದ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಗುರುವಾರ(ಅ. 23) ವರದಿಯಾಗಿದೆ. ಅಹತಾ ಗ್ರಾಮದ ಹರಿಕಿಶನ್ ಎಂಬ ಆರೋಪಿಯನ್ನು ಮಂಗಳವಾರ ನೆರೆಯ ಬಾರಾಬಂಕಿ ಜಿಲ್ಲೆಯ ದುರ್ಗಾಪುರ ತಪೇಸಿ ಗ್ರಾಮದಲ್ಲಿ ಬಂಧಿಸಲಾಗಿದೆ. […]