ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ

ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭಾಗಿಯಾಗು ತ್ತಿದ್ದಾರೆ. ಗುರುವಾರ ಭಾರತ ಸರಕಾರವೇ ಆಹ್ವಾನಿಸಿರುವ 10 ದೇಶಗಳ 21 ಮಂದಿಯ ತಂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಫಿಜಿ, ಫಿನ್ಲಂಡ್‌, ಗಯಾನಾ, ಮಲೇಶಿಯಾ, ಮಾರಿಷಸ್‌, ಸಿಂಗಾಪುರ, ದ.ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್‌ ಮತ್ತು ಟೊಬ್ಯಾಗೋ ಹಾಗೂ ಯುಎಇ ದೇಶಗಳಿಂದ 21 ಮಂದಿಯನ್ನು ಭಾರತದ ವಿದೇ ಶಾಂಗ ಸಚಿವಾಲಯ ಆಹ್ವಾನಿಸಿದೆ. ಗುರುವಾರ ಸಾಯಂಕಾಲ 5 ಗಂಟೆಯಿಂದ 6.30ರೊಳಗೆ ಇವರು ಪುಣ್ಯಸ್ನಾನ ಮಾಡಲಿದ್ದಾರೆ […]