ಉತ್ತರಪ್ರದೇಶ: ಮದುವೆ ಸಮಾರಂಭದಲ್ಲಿ ತಂದೂರಿ ರೊಟ್ಟಿಗಾಗಿ ಜಗಳ -ಇಬ್ಬರ ಸಾವು

ಉತ್ತರ ಪ್ರದೇಶ: ಮದುವೆ ಸಮಾರಂಭವೊಂದರ ಊಟದ ಸಮಯದಲ್ಲಿ ತಂದೂರಿ ರೊಟ್ಟಿಗಾಗಿ ಯುವಕರಿಬ್ಬರ ನಡುವೆ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಅಮೇಥಿಯಲ್ಲಿ ಕಳೆದ ಶನಿವಾರ ಮೇ.3 ರಂದು ನಡೆದಿದೆ. ಮೃತರನ್ನು ರವಿ ಕುಮಾರ್ ಅಲಿಯಾಸ್ ಕಲ್ಲು (18) ಹಾಗೂ ಆಶಿಶ್ ಕುಮಾರ್ (17) ಎಂದು ಗುರುತಿಸಲಾಗಿದೆ. ಏನಿದು ಪ್ರಕರಣ:ಶನಿವಾರ ಸಂಜೆ (ಮೇ.3) ಬಲಭದ್ರಾಪುರ ಗ್ರಾಮದ ನಿವಾಸಿ ರಾಮಜೀವನ್ ವರ್ಮಾ ಅವರ ಮಗಳ ವಿವಾಹ ಪಟ್ಟಣದ ಕಲ್ಯಾಣ […]