ಪ್ರಿಯಕರನಿಗಾಗಿ ಪುಟ್ಟ ಮಗಳನ್ನೇ ನೀರಿಗೆ ಎಸೆದು ಬಿಟ್ಟ ಮಹಾತಾಯಿ!

ರಾಜಸ್ಥಾನ: ಪ್ರಿಯಕರನಿಗೋಸ್ಕರ ತನ್ನ ಪತಿಯಿಂದ ಪಡೆದಿದ್ದ ಮೂರು ವರ್ಷದ ಮಗಳನ್ನು ಸರೋವರಕ್ಕೆ ಎಸೆದು ಕೊಲೆ ಮಾಡಿದ ಮಹಿಳೆಯನ್ನು ಅಜ್ಮೇರ್ ಪೋಲಿಸರು ಬಂಧಿಸಿದ್ದಾರೆ. ಮಹಿಳೆ ಮೂಲತಃ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ಅಂಜಲಿ(28). ಪತಿಯಿಂದ ಪ್ರತ್ಯೇಕಗೊಂಡ ಬಳಿಕ ಅಜ್ಮೇರ್‌ಗೆ ಸ್ಥಳಾಂತರಗೊಂಡು ತನ್ನ ಪ್ರಿಯಕರ ಅಲ್ಕೇಶ್ ಜೊತೆ ವಾಸವಾಗಿದ್ದಳು. ಆಕೆ ಹೋಟೆಲ್‌ವೊಂದರಲ್ಲಿ ಸ್ವಾಗತಕಾರ್ತಿಯಾಗಿ ಕೆಲಸ ಮಾಡುತ್ತಿದ್ದು, ಅಲ್ಕೇಶ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಮಂಗಳವಾರ ರಾತ್ರಿ ಮಗುವಿಗೆ ಜೋಗುಳ ಹಾಡಿ ಅದು ನಿದ್ರೆಗೆ ಜಾರುತ್ತಿದ್ದಂತೆ ಅದನ್ನೆತ್ತಿಕೊಂಡು ಸರೋವರವೊಂದರ ಬಳಿ ವಾಕಿಂಗ್‌ಗೆ […]