ಸಂಪುಟ ರಚನೆಯಾಗದಿದ್ದರೂ ನೆರೆ ಪರಿಹಾರಕ್ಕೆ ತೊಡಕಾಗಿಲ್ಲ: ಕೆ. ರಘುಪತಿ ಭಟ್

ಉಡುಪಿ: ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಅನಂತರ ನೆರೆ ಹಾವಳಿ ಇತ್ಯಾದಿ ಹಲವಾರು ಪ್ರತಿಕೂಲ ಕಾರಣಗಳಿಂದ ಸಂಪುಟ ವಿಸ್ತರಣೆ ಮಾಡಲಾಗದಿದ್ದರೂ ಇಂದು ಉತ್ತರಕರ್ನಾಟಕದಲ್ಲಿ ಭೀಕರ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ಕಾರ್ಯಾಚರಣೆ ನಡೆಸುವಲ್ಲಿ ಯಾವುದೇ ತೊಡಕಾಗಿಲ್ಲ. ಈಗಾಗಲೇ ಮೂರು ದಿನಗಳಿಂದ ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನೆರೆ ಪೀಡಿತ ಪ್ರದೇಶಗಳಲ್ಲಿ ಬೀಡು ಬಿಟ್ಟು ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮತ್ತು ಪರಿಹಾರ ಕಾರ್ಯಾಚರಣೆಗಾಗಿಯೇ ಶಾಸಕರುಗಳ ನಿಯೋಗವನ್ನು ರಚಿಸಿ […]