ಉತ್ತರ ಪ್ರದೇಶ: ಗಂಡನ ತಮಾಷೆಗೆ ಬೇಸತ್ತು ಪತ್ನಿ ಆತ್ಮಹತ್ಯೆ!

ಲಖನೌ: ಗಂಡ ತಮಾಷೆಗೆ ‘ಮಂಗ’ ಎಂದು ಕರೆದದ್ದರಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಖನೌನಲ್ಲಿ ಗುರುವಾರ ನಡೆದಿದೆ.ಮೃತ ಮಹಿಳೆ ತನು ಸಿಂಗ್ ಅವರಿಗೆ ಮಾಡೆಲಿಂಗ್‌ನಲ್ಲಿ ಆಸಕ್ತಿ ಇತ್ತು. ಹಾಗಾಗಿಯೇ, ಪತಿ ಮಾಡಿದ ತಮಾಷೆಯನ್ನು ಗಂಭೀರವಾಗಿ ಪರಿಗಣಿಸಿದ್ದರು ಎನ್ನಲಾಗಿದೆ. ಲಖನೌನ ತಕ್ರೋಹಿ ಪ್ರದೇಶದ ನಿವಾಸಿ ರಾಹುಲ್ ಶ್ರೀವಾಸ್ತವ ಹಾಗೂ ತನು ಅವರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆಟೋ ಚಾಲಕನಾಗಿರುವ ರಾಹುಲ್ ಅವರು, ತನು ಅವರ ಕುರಿತು ತಮಾಷೆ ಮಾಡುತ್ತಾ ‘ಬಂಡಾರಿಯಾ’ (ಮಂಗ) ರೀತಿ ಕಾಣುತ್ತಿದ್ದೀಯ ಎಂದಿದ್ದರು. […]