ವ್ಯಕ್ತಿಯ ಜೊತೆ ಅನೈತಿಕ ಸಂಬಂಧ: ರಾಖಿ ಹಬ್ಬದ ದಿನವೇ ಸಹೋದರಿಯನ್ನು ಕೊಂದ ಅಣ್ಣ!

ಉತ್ತರಪ್ರದೇಶ: ಉತ್ತರಪ್ರದೇಶದ ಗರೌತ ಪ್ರದೇಶದಲ್ಲಿ 18 ವರ್ಷದ ತನ್ನ ಸಹೋದರಿ ಮತ್ತೊಬ್ಬ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಬೇಸತ್ತ ವ್ಯಕ್ತಿಯೊಬ್ಬ, ರಕ್ಷಾ ಬಂಧನ ಆಚರಿಸಿದ ನಂತರ ಆಕೆಯನ್ನು ಕೊಂದ ಘಟನೆ ಭಾನುವಾರ ನಡೆದಿದೆ. ಚಂದ್ರಾಪುರ ಗ್ರಾಮದ ನಿರ್ಜನ ಪ್ರದೇಶದ ದಾದಾ ಮಹಾರಾಜ್ ಪ್ಲಾಟ್‌ಫಾರ್ಮ್ ಬಳಿ ಕುಮಾರಿ ಸಹೋದರ್(18) ಅಲಿಯಾಸ್ ಪುಟ್ಟಿ ಅವರ ಶವ ಭಾನುವಾರ ಪತ್ತೆಯಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ ಪುಟ್ಟಿಯ ಸಹೋದರ ಅರವಿಂದ್ ಮತ್ತು ಅವರ ಸ್ನೇಹಿತ ಪ್ರಕಾಶ್ ಪ್ರಜಾಪತಿ ಅವರನ್ನು ಬಂಧಿಸಲಾಗಿದೆ […]