ಮಂಗಳೂರು: ನ. 26ರಂದು ಪುರಭವನದಲ್ಲಿ ಉತ್ತರ್-ದಕ್ಷಿಣ್ ಸಂಗೀತ ಕಾರ್ಯಕ್ರಮ

ಮಂಗಳೂರು: ದೇಶದ ನಾನಾ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದ ಸರಣಿ ಸಂಗೀತಕಾರ್ಯಕ್ರಮ `ಉತ್ತರ್-ದಕ್ಷಿಣ್’ ನ. 26 ಶನಿವಾರದಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5.30 ರಿಂದ ನಡೆಯಲಿದೆ. ನಗರದ ಪ್ರತಿಷ್ಠಿತ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ವಿವಿದ್‌ ಆರ್ಟ್ಸ್ ಆ್ಯಂಡ್‌ ಎಂಟರ್‌ಟೈನ್‌ಮೆಂಟ್ ಹಾಗೂ ದಿ ಪಯೋನೀರ್‌ ಆರ್ಟ್ಸ್ ಎಜ್ಯುಕೇಷನ್ ಸೊಸೈಟಿಯು ಪ್ರಸ್ತುತ ಪಡಿಸುತ್ತಿದ್ದು, ದೇಶದ 11 ವೇದಿಕೆಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ ಈ ಸರಣಿಯ 12ನೇ ಕಾರ್ಯಕ್ರಮವು ನ. 26ರಂದು ಮಂಗಳೂರಿನಲ್ಲಿ ನಡೆಯಲಿದೆ. ಪ್ರಖ್ಯಾತ ಗಾಯಕಿ […]