ಭಾರತೀಯ ಸೈನಿಕರನ್ನು ಕೊಂದರೂ ಯಾಕೆ ಸುಮ್ಮನಾಗಿದ್ದಾರೆ: ಖಾದರ್ ಪ್ರಶ್ನೆ

ಮಂಗಳೂರು: ಚೀನಾ ಸೈನಿಕರು ಈಗ ಭಾರತದ ಒಳಕ್ಕೆ ಬಂದು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ. ಈಗ ಯಾಕೆ 56 ಇಂಚಿನ ಎದೆಗಾರಿಕೆಯವರು ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನೆ ಮಾಡಿದ್ದಾರೆ. ಮಂಗಳೂರಲ್ಲಿರೋ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಇದ್ದಾಗ ಮೌನಿ ಬಾಬಾ ಎನ್ನುತ್ತಿದ್ದವರು ಈಗೆಲ್ಲಿದ್ದಾರೆ. ಮನೆಗೆ ಹೊಕ್ಕಿ ಹೊಡೆಯುವುದಾಗಿ ಭಾಷಣ ಮಾಡಿದ್ದವರು ಮೌನವಾಗಿದ್ದು ಏಕೆ ಎಂದು ವ್ಯಂಗ್ಯವಾಡಿದ ಖಾದರ್, ಹೊಡೆಯಬೇಕಿತ್ತಲ್ವಾ.. ಯಾಕೆ ಸುಮ್ಮನೆ ಕುಳಿತಿದ್ದಾರೆ..? ಎಂದು ಪ್ರಶ್ನೆ ಮಾಡಿದ್ದಾರೆ. […]