ಈ ವಸ್ತುಗಳನ್ನು ಆಹಾರವಾಗಿ ಬಳಸಿದರೆ ಕಾಯಿಲೆ ನಿಮ್ಮ ಹತ್ರ ಸುಳಿಯೋದಿಲ್ಲ!ರಾಷ್ಟ್ರೀಯ ಆಯುರ್ವೇದ ದಿನದ ವಿಶೇಷ ಟಿಪ್ಸ್

ಇಂದು ಆಯುರ್ವೇದ ದಿನಾಚರಣೆ. ಆಯುರ್ವೇದದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ದಿನವಿದು. ಭಾರತದ ಪಾಲಿಗೆ ಆಯುರ್ವೇದ ಎನ್ನುವುದು ನಿಜಕ್ಕೂ ಒಂದು ಹೆಮ್ಮೆಯ ಸಂಗತಿ. ಏಕೆಂದರೆ ಆಯುರ್ವೇದದ ಮೂಲವೇ ಭಾರತ. ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾರತೀಯ ವೈದ್ಯ ಪದ್ದತಿ. ಇದರ ದೇವತೆ ಧನ್ವಂತರಿ. ದೇವಾನುದೇವತೆಗಳ ವೈದ್ಯ ಎಂದು ಧನ್ವಂತರಿಯನ್ನು ಗುರುತಿಸಲಾಗಿದೆ. ಇಂತಹ ಮಹತ್ವವನ್ನು ಪಡೆದ ಆಯುರ್ವೇದಕ್ಕೆ ಒಂದು ಕಾಲದಲ್ಲಿ ನಮ್ಮಲ್ಲಿ ಮಾತ್ರ ವಿಶಿಷ್ಠ ಸ್ಥಾನವಿತ್ತು. ಆದರೆ, ಅದು ಈಗ ಲೋಕಕ್ಕೆ ಬೆಳಕನ್ನು ನೀಡುವ ನೆಮ್ಮದಿಯನ್ನು ಕಂಡುಕೊಳ್ಳುವ ಹೊಸ ದಾರಿಯಾಗಿದೆ. […]