ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಗೆಲುವಿನ ಆರಂಭ: ಬಿಡಬ್ಲ್ಯುಎಫ್

ಸ್ಪೋಕೇನ್ (ಯುಎಸ್‌ಎ): ಅಮೆರಿಕದ ಸ್ಪೋಕೇನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಮಿಶ್ರ ಟೀಮ್ ಈವೆಂಟ್‌ನಲ್ಲಿ ಭಾರತೀಯ ಶಟ್ಲರ್‌ಗಳು ಕುಕ್ ಐಲ್ಯಾಂಡ್ಸ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.ಮಿಶ್ರ ಡಬಲ್ಸ್ ಜೋಡಿ ಸಾಥ್ವಿಕ್ ರೆಡ್ಡಿ ಕಾನಪುರಂ ಮತ್ತು ವೈಷ್ಣವಿ ಖಡ್ಕೇಕರ್ ಭಾರತಕ್ಕೆ ಗೆಲುವಿನ ಆರಂಭವನ್ನು ಮಾಡಿದರು. ಕುಕ್ ದ್ವೀಪದ ಕೈಯಿನ್ ಮಟಾಯೊ ಮತ್ತು ತೆರೆಪಿ ಅಕಾವಿ ಅವರನ್ನು 21-6, 21-8ರ ನೇರ ಸೆಟ್ ಭಾರಿ ಅಂತರಿಂದ ಸೋಲಿಸಿದರು. ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ವ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ […]