ಜೋರ್ಡಾನ್ ಮೇಲಿನ ದಾಳಿಗೆ ಇರಾನ್ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದ ಅಮೇರಿಕಾ; ಉಗ್ರ ನೆಲೆ ಧ್ವಂಸ

ಟೆಹ್ರಾನ್: ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಏರ್‌ಸ್ಟ್ರೈಕ್ ಮಾಡಿದ್ದು, 85 ಗುರಿಗಳ ಮೇಲೆ ದಾಳಿ ನಡೆಸಿದೆ. ಜೋರ್ಡಾನ್ ಮೇಲಿನ ದಾಳಿಗೆ ಅಮೆರಿಕ ಪ್ರತಿದಾಳಿ ಮಾಡಿದ್ದು, ಏಳು ಸ್ಥಳಗಳನ್ನು ಗುರಿಯಾಗಿಸಿ 17 ಉಗ್ರರನ್ನು ಮಟ್ಟಹಾಕಿದೆ. 85 ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಘಟಕಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಕಮಾಂಡ್, ಕಂಟ್ರೋಲ್ ಸೆಂಟರ್, ರಾಕೆಟ್, ಕ್ಷಿಪಣಿ, ಡ್ರೋನ್ ಸಂಗ್ರಹಣಾ ಕೇಂದ್ರ, ಲಾಜಿಸ್ಟಿಕ್ಸ್ ಹಾಗೂ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದ ಸ್ಥಳಗಳನ್ನೇ ಅಮೆರಿಕ ಟಾರ್ಗೆಟ್ ಮಾಡಿದೆ. […]