UPSC ಫಲಿತಾಂಶ: ದೇಶಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಆದಿತ್ಯ ಶ್ರೀವಾಸ್ತವ

ದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇತ್ತೀಚೆಗೆ 2023 ರ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿತು, ಅಲ್ಲಿ ವಿದ್ಯಾರ್ಥಿ ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. UPSC ಟಾಪರ್ ಆದಿತ್ಯ ಶ್ರೀವಾಸ್ತವ ಉತ್ತರ ಪ್ರದೇಶದ ಲಕ್ನೋ ನಿವಾಸಿ. ಲಕ್ನೋದ ಸಿಟಿ ಮಾಂಟೆಸ್ಸರಿ ಶಾಲೆ (CMS) ನಲ್ಲಿ 12 ನೇ ವರೆಗೆ ಓದಿದ್ದಾರೆ. 2021 ರಲ್ಲಿ, ಆದಿತ್ಯ ಯುಪಿಎಸ್‌ಸಿಯಲ್ಲಿ 485 ನೇ ಸ್ಥಾನ ಗಳಿಸಿದ್ದರು. ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನ ಗಳಿಸಿದ್ದು, ಅನಿಮೇಶ್ ಪ್ರಧಾನ್ ಮತ್ತು […]
ಅ. 9 ರಂದು ಗ್ರಾಮ ಪಂಚಾಯತ್ ಗಳಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯ ಪ್ರಾಯೋಗಿಕ ತರಬೇತಿ

ಉಡುಪಿ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆನ್‌ಲೈನ್ ತರಬೇತಿ ಆಯೋಜಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವ್ಯವಸ್ಥೆ ಮಾಡಿಕೊಂಡಿದ್ದು, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಸಾಮಾನ್ಯ ಜ್ಞಾನ ಪತ್ರಿಕೆಯ ಆನ್‌ಲೈನ್ ತರಬೇತಿಯನ್ನು ಪ್ರಾಯೋಗಿಕವಾಗಿ ಅಕ್ಟೋಬರ್ 9 ರಂದು ಸಂಜೆ 5.30 ಕ್ಕೆ ಆರಂಭಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿಚ್ಚಿಸುವ ಅಭ್ಯರ್ಥಿಗಳು https://udupi-spardha.com ಮೂಲಕ ಆಥವಾ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ […]
ಎನ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿಗಳು ತೇರ್ಗಡೆ

ಮಂಗಳೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅರ್ಹತೆ ಪಡೆದು ಮುಂದಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನ ಅರ್ಜುನ್ ಕಿಶೋರ್ ಮತ್ತು ಬೆಂಗಳೂರಿನ ಸವ್ಯಸಾಚಿ ಎಸ್. ಆಯ್ಕೆಯಾಗಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 2023ರ ಸೆಪ್ಟೆಂಬರ್ 3 ರಂದು ಪರೀಕ್ಷೆ ನಡೆಸಿತ್ತು.
ರೈಲು ಅಪಘಾತದಲ್ಲಿ ಎರಡು ಕಾಲು,ಬಲಗೈ ಹಾಗೂ ಎಡಗೈ ಬೆರಳು ಕಳೆದುಕೊಂಡರೂ ಯು.ಪಿ.ಎಸ್.ಸಿ ಪಾಸ್ ಮಾಡಿದ ಛಲದಂಕಮಲ್ಲ ಸೂರಜ್ ತಿವಾರಿ

ಲಕ್ನೋ: ಕೇಂದ್ರ ಲೋಕಸೇವಾ ಆಯೋಗ (UPSC) 2022 ರಲ್ಲಿ ನಡೆದ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಉತ್ತರ ಪ್ರದೇಶದ ಸೂರಜ್ ತಿವಾರಿ ಯಶಸ್ವಿಯಾಗಿ ತೇರ್ಗಡೆಯಾದ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಮೈನ್‌ಪುರಿಯ ಸೂರಜ್ ತಿವಾರಿ 2017 ರಲ್ಲಿ ಗಾಜಿಯಾಬಾದ್‌ನ ದಾದ್ರಿಯಲ್ಲಿ ನಡೆದ ರೈಲು ಅಪಘಾತದಲ್ಲಿ ತನ್ನ ಎರಡೂ ಕಾಲುಗಳು ಹಾಗೂ ಬಲಗೈ ಮತ್ತು ಎಡಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಆದರೂ ಎದೆಗುಂದದ ಅವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಸೂರಜ್ […]
ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ CAPF ಕಾನ್ಸ್‌ಟೇಬಲ್ ಪರೀಕ್ಷೆ ನಡೆಸಲು ಕೇಂದ್ರ ಗೃಹ ಸಚಿವಾಲಯ ನಿರ್ಧಾರ

ನವದೆಹಲಿ: 2024 ಜ.1ರ ಬಳಿಕ ಕೇಂದ್ರ ಅರೆಸೇನಾ ಪಡೆಗಳು ಅಥವಾ CAPF ಗಳಲ್ಲಿ ಕಾನ್ಸ್‌ಟೇಬಲ್‌ಗಳ (ಜನರಲ್ ಡ್ಯೂಟಿ) ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಹೆಚ್ಚುವರಿಯಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನಿರ್ಧರಿಸಿದೆ. CAPF ಗಳಲ್ಲಿ ಸ್ಥಳೀಯ ಯುವಕರ ಭಾಗವಹಿಸುವಿಕೆಗೆ ಉತ್ತೇಜನ ನೀಡಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಕ್ರಮದಲ್ಲಿ ತೆಗೆದುಕೊಂಡ “ಹೆಗ್ಗುರುತಿನ” ನಿರ್ಧಾರ ಎಂದು ಸಚಿವಾಲಯ ಬಣ್ಣಿಸಿದೆ. ಪ್ರಶ್ನೆ ಪತ್ರಿಕೆಗಳನ್ನು […]