ಉಪ್ಪೂರು: 55 ಕುಟುಂಬಗಳಿಗೆ ಖಾಯಂ ನಿವೇಶನ ಹಕ್ಕುಪತ್ರ ವಿತರಣೆ

ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದ ಉಪ್ಪೂರು- 55 ಕುಟುಂಬಗಳಿಗೆ ಖಾಯಂವಾಗಿರುವ 55 ಕುಟುಂಬಗಳಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕ ಕೆ. ರಘುಪತಿ ಭಟ್ ಅವರು ಉಪ್ಪೂರು ಗ್ರಾಮದ ಗೆಳೆಯರ ಬಳಗದ ವಠಾರದಲ್ಲಿ ಇಂದು ವಿತರಿಸಿದರು. ಉಪ್ಪೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಈ ಕುಟುಂಬಗಳಿಗೆ ಗೋಮಾಳದ ಸಮಸ್ಯೆಯಿಂದಾಗಿ ಹಕ್ಕುಪತ್ರ ನೀಡಲು ಸಮಸ್ಯೆ ಉಂಟಾಗಿತ್ತು. ವಿಶೇಷ ಪ್ರಕರಣಗಳ ಅಡಿ ಗೋಮಾಳವನ್ನು ವಿರಹಿತಗೊಳಿಸಿ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು […]