ಉಪ್ಪಿನಂಗಡಿ: ಮಂಗಗಳ ಮಾರಣಹೋಮ: ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ‌ ಭೇಟಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಂದಾರು ಗ್ರಾಮದ ಕುಂಟಾಲಪಲ್ಕೆ ಕಲ್ಲರ್ಪೆ ಎಂಬಲ್ಲಿ ರಸ್ತೆ ಬದಿ ಸುಮಾರು 50ಕ್ಕೂ ಹೆಚ್ಚು ಸತ್ತ ಹಾಗೂ ಜೀವಂತ ಇದ್ದ ಮಂಗಗಳು ಪತ್ತೆಯಾಗಿದ್ದು, ಯಾರೋ ಮಂಗಗಳಿಗೆ ವಿಷ ವಿಕ್ಕಿ ಸತ್ತ ನಂತರ ಅದನ್ನು ವಾಹನದಲ್ಲಿ ತಂದು ಇಲ್ಲಿ ಹಾಕಿರಬೇಕು ಎನ್ನಲಾಗಿದೆ. ರಸ್ತೆ ಬದಿಯಲ್ಲಿ‌ ವಾಹನದಲ್ಲಿ ಹೋಗುವವರು ಗಮನಿಸಿ ಗ್ರಾ.ಪಂ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರೆ ಜೀವದಲ್ಲಿದ್ದ ಕೆಲವು ಮಂಗಗಳು ಅರೆಪ್ರಜ್ಞಾವಸ್ಥೆಯಲ್ಲಿ ಚೇತರಿಸಿಕೊಂಡು ಹತ್ತಿರದ ಕಾಡಿಗೆ ಹೋದರೆ ಉಳಿದವು ಸತ್ತು […]