ಉಪ್ಪಿನಂಗಡಿ: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಉಪ್ಪಿನಂಗಡಿ: ಇಲ್ಲಿನ ಖಾಸಗಿ ಶಾಲಾ ವಿದ್ಯಾರ್ಥಿ ಶ್ರವಣ್ (13) ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ನಿವಾಸಿ ಡೊಂಬಯ್ಯ ಗೌಡ ಎಂಬವರ ಮಗ ಶ್ರವಣ್ 7 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಮಂಗಳವಾರ ರಾತ್ರಿ ತಾಯಿಯೊಂದಿಗೆ ಮಲಗಿದವ ತಾಯಿ ನಿದ್ರೆಗೆ ಜಾರಿದಂತೆಯೇ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿ ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾನೆ. ಮೃತರ ಗೌರವಾರ್ಥ ಆತ ಕಲಿಯುತ್ತಿದ್ದ ವಿದ್ಯಾಲಯದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ […]