ಬಳಕೆದಾರರ ಒಪ್ಪಿಗೆ ಇಲ್ಲದೆ ಯುಪಿಐ ಆ್ಯಪ್ ಗಳು ಲೊಕೇಶನ್ ಡೇಟಾ ಸಂಗ್ರಹಿಸುವಂತಿಲ್ಲ: ಎನ್.ಪಿ.ಸಿ.ಐ

ನೆವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ) ಎಲ್ಲಾ ಯುಪಿಐ-ಆಧಾರಿತ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರ ಲೊಕೇಶನ್ ಡೇಟಾವನ್ನು ಸಂಗ್ರಹಿಸುವ ಮೊದಲು ಇದಕ್ಕೆ ಬಳಕೆದಾರರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ತಮ್ಮ ಲೊಕೇಶನ್ ಹಂಚಿಕೊಳ್ಳಲು ಸಮ್ಮತಿಯನ್ನು ಸಕ್ರಿಯಗೊಳಿಸುವ ಅಥವಾ ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರಿಗೆ ಕಡ್ಡಾಯವಾಗಿ ಒದಗಿಸಬೇಕು ಎಂದು ಅದು ಹೇಳಿದೆ. “ಸೇವೆಗಳನ್ನು ಪಡೆದುಕೊಳ್ಳುವಾಗ ಆರಂಭದಲ್ಲಿ ಯುಪಿಐ ಅಪ್ಲಿಕೇಶನ್‌ಗಳಿಗೆ ಲೊಕೇಶನ್ ಹಂಚಿಕೊಳ್ಳಲು ಗ್ರಾಹಕರು ಈಗಾಗಲೇ ಒಪ್ಪಿಗೆ ನೀಡಿದ್ದರೆ ಮತ್ತು ನಂತರ ಸಮ್ಮತಿಯನ್ನು ಹಿಂಪಡೆಯಲು ಬಯಸಿದ್ದರೂ ಸಹ, ಗ್ರಾಹಕರಿಗೆ […]