ಹಿರಿಯಡಕ : ಆಂಗ್ಲಭಾಷೆ ಕಲಿಕೆಯ ಉಪನ್ಯಾಸ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದಲ್ಲಿ ಮಾರ್ಚ್ 26 ರಂದು ಆಂಗ್ಲಭಾಷಾ ವಿಭಾಗದ ಆಶ್ರಯದಲ್ಲಿ ಆಂಗ್ಲಭಾಷೆಯ ಕಲಿಕೆಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶಂಕರನಾರಾಯಣ ಮದರ್ ಥೆರೆಸಾ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕ ರಾಮ ಭಟ್ಟ ಮಾತನಾಡಿ, ಪ್ರಮುಖವಾಗಿ ಆಂಗ್ಲಭಾಷೆಯ ಮೇಲಿನ ಭಯವನ್ನು ಹೋಗಲಾಡಿಸಿದರೆ ಆ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಎಂದು ನುಡಿದರು. ವಿದ್ಯಾರ್ಥಿಗಳಲ್ಲಿ ಆಂಗ್ಲಭಾಷೆಯನ್ನು ಕಲಿಯುವಾಗ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು ಮತ್ತು ಅವುಗಳನ್ನು ಎದುರಿಸುವ ರೀತಿಯ ಬಗ್ಗೆ ಮಾತನಾಡಿದರು. ಕಾಲೇಜಿನ […]