ಶಾಲೆಯಿಂದ ಹೊರಗುಳಿದ 19 ಮಿಲಿಯನ್ ಮಕ್ಕಳು : ಸುಡಾನ್ ಸಂಘರ್ಷಕ್ಕೆ 6 ತಿಂಗಳು

ವಿಶ್ವಸಂಸ್ಥೆ : ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್ಎಸ್ಎಫ್) ನಡುವಿನ ಯುದ್ಧ ಆರಂಭಗೊಂಡು ಮುಂದಿನ ವಾರ ಆರು ತಿಂಗಳಿಗೆ ಸಮೀಸುತ್ತಿದೆ. ಈ ಸಶಸ್ತ್ರ ಆಂತರಿಕ ಹೋರಾಟದಿಂದ ಸುಡಾನ್ ದೇಶ ಜರ್ಜರಿತವಾಗಿದ್ದು, ಅಂದಾಜು 19 ಮಿಲಿಯನ್ ಮಕ್ಕಳು ವಿದ್ಯಾಭ್ಯಾಸದಿಂದ ಹೊರಗುಳಿದಿದ್ದಾರೆ ಎಂದು ಯುನಿಸೆಫ್ ಮತ್ತು ಸೇವ್ ದಿ ಚಿಲ್ಡ್ರನ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.ಸುಡಾನ್ನಲ್ಲಿ ಮುಂದುವರಿದಿರುವ ಸಶಸ್ತ್ರ ಸಂಘರ್ಷದ ಕಾರಣದಿಂದ ಸುಮಾರು 19 ಮಿಲಿಯನ್ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಏತನ್ಮಧ್ಯೆ, ಯುದ್ಧದ ಪರಿಣಾಮ […]