ಸಮವಸ್ತ್ರ ನಿಯಮ‌ ಎಲ್ಲರಿಗೂ ಅನ್ವಯಿಸುತ್ತದೆ: ಸುನಿಲ್ ಕುಮಾರ್

ಉಡುಪಿ: ಕಾಲೇಜಿಗೆ ಸಮವಸ್ತ್ರ ಹಾಕಿಕೊಂಡು ಬರುವ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ಇದು ಯಾವುದೋ ಒಂದು ಗುಂಪಿಗೆ, ಸಮುದಾಯದ ಸಂಘಟನೆಗೆ ಸೀಮಿತ ಎನ್ನುವ ಮಾತನ್ನು ಹೇಳಲಾಗದು. ಎಲ್ಲರೂ ಸಮವಸ್ತ್ರ ಪಾಲನೆ ಮಾಡಬೇಕೆಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಹಿಜಾಬ್ ವಿವಾದದ ಕುರಿತಾಗಿ ಉಡುಪಿಯಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಹಿಜಾಬ್ ಹಿಂದಿನ ಹಿಡನ್ ಅಜೆಂಡಾವನ್ನು ನಮ್ಮ ಸರಕಾರ ಸಹಿಸುವುದಿಲ್ಲ. ಇದರ ಹಿಂದಿರುವ ಕಾಣದ ಮತೀಯ ಸಂಘಟನೆಗಳನ್ನು ಸರಕಾರ ಬಗ್ಗು ಬಡಿಯುತ್ತದೆ. ಈ ನೆಲದ ಕಾನೂನು ಗೌರವಿಸಬೇಕಾಗಿರುವುದು ಎಲ್ಲರ […]