ಅವಿಭಜಿತ ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಬಹಿಷ್ಕರಿಸಿ ವ್ಯಾಪಾರ; ಕೆನರಾ ಉದ್ಯಮಿಗಳ ಒಕ್ಕೂಟ ಘೋಷಣೆ

ಉಡುಪಿ: ರಾಜ್ಯ ಸರಕಾರ ಈ ವಾರದಿಂದ ವೀಕೆಂಡ್ ಕರ್ಫ್ಯೂ ಹಿಂಪಡೆಯದಿದ್ದರೆ ಸರಕಾರದ ಎಲ್ಲ ಆದೇಶಗಳನ್ನು ದಿಕ್ಕರಿಸಿ, ಕೇಸು, ಬಂಧನಕ್ಕೆ ಹೆದರದೆ ಶನಿವಾರ ಮತ್ತು ಭಾನುವಾರ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟು ವ್ಯಾಪಾರ ನಡೆಸಲಾಗುವುದು ಎಂದು ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳ ಒಟ್ಟು 40 ವರ್ತಕರ ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟ ತಿಳಿಸಿದೆ. ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಎಂ.ಜಿ ಹೆಗ್ಡೆ ಅವರು, ರಾಜ್ಯದಲ್ಲಿ ಅವೈಜ್ಞಾನಿಕ‌ ಹಾಗೂ ಅನೈತಿಕವಾದ ನೈಟ್ […]