ಪವರ್ ಸಂಸ್ಥೆ ಆಶ್ರಯದಲ್ಲಿ ‘ಚಾರ್ಟರ್ ಡೇ’ ಹಾಗೂ ‘ಮಹಿಳಾ ದಿನಾಚರಣೆ’

ಉಡುಪಿ: ಪವರ್ ಫ್ಲಾಟ್‌ ಫಾರಂ ಆಫ್ ವುಮೆನ್ ಎಂಟರ್‌ಫ್ರಿನಿಯರ್ಸ್(ರಿ) ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚಾರ್ಟರ್‌ ಡೇ ಯು ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಭಾಷಾ ನಟಿ ವಿನಯ ಪ್ರಸಾದ್ ಅವರು ನೆರವೇರಿಸಿದರು. ಪವರ್ ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ಪೂನಂ ಶೆಟ್ಟಿ, ಕಾರ್ಯದರ್ಶಿಯಾಗಿ ಅರ್ಚನಾ ರಾವ್, ಕೋಶಾಧಿಕಾರಿಯಾಗಿ ಪ್ರತಿಭಾ ಆರ್.ವಿ., ಜೊತೆ ಕಾರ್ಯದರ್ಶಿಯಾಗಿ ತೃಪ್ತಿ ನಾಯಕ್, ಉಪಾಧ್ಯಕ್ಷರಾಗಿ ಸುವರ್ಶಾ ಮಿನ್ಜ್ ಹಾಗೂ ಶಾಲಿನಿ ಬಂಗೇರ ಪದಗ್ರಹಣ ಸ್ವೀಕರಿಸಿದರು. […]