ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 400 ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಮಾಡಿದ ಶಾಸಕ ರಘುಪತಿ ಭಟ್

ದೇಶಾದ್ಯಂತ ಭಾರೀ ಯಶಸ್ಸು ಕಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವ ಮಹತ್ವಾಕಾಂಕ್ಷೆಯ ಯೋಜನೆಯಾದ “ಉಜ್ವಲ” ಯೋಜನೆಯಡಿಯಲ್ಲಿ  ಉಡುಪಿ ಜಿಲ್ಲೆಯ ಒಟ್ಟು 2000 ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ಈಗಾಗಲೇ ಸಿಕ್ಕಿದ್ದು ಇಂದು 400 ಜನರಿಗೆ ಗ್ಯಾಸ್ ವಿತರಣೆಯನ್ನು ಶಾಸಕರಾದ ಶ್ರೀ ರಘುಪತಿ ಭಟ್ ಅವರು ಮಾಡಿದ್ದಾರೆ. ಕೊಕ್ಕರ್ಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ಕೇಂದ್ರ ಸರಕಾರ ಜನಸಾಮಾನ್ಯರ ಕಣ್ಣೊರೆಸುವ ಕೆಲಸ ಮಾಡುತ್ತಿದೆ, ಒಲೆಯ ಮುಂದೆ ಕೂತು ಕಣ್ಣೀರುಡುತ್ತಿದ್ದ ತಾಯಂದಿರ ಮುಖದಲ್ಲಿ ಇಂದು ಮಂದಹಾಸ ಕಾಣುತ್ತಿದೆ, ಯಾಕೆಂದರೆ […]