ಇಂಫಾಲದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ UFO? ಭಾರತೀಯ ವಾಯು ಸೇನೆಯಿಂದ ವಾಯು ರಕ್ಷಣಾ ಪ್ರತಿಕ್ರಿಯೆ

ಇಂಫಾಲ್: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಬಿರ್ ಟಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಿತ ವಾಯುಪ್ರದೇಶವನ್ನು ಅಪರಿಚಿತ ಹಾರುವ ವಸ್ತು(UFO) ಕಂಡ ನಂತರ ಸುಮಾರು ಮೂರು ಗಂಟೆಗಳ ಕಾಲ ಮುಚ್ಚಲಾಗಿತ್ತು ಎಂದು ವರದಿಯಾಗಿದೆ. ಭಾನುವಾರ ಮಧ್ಯಾಹ್ನ 2.30 ಕ್ಕೆ ಇಂಫಾಲ್ ಏರ್ ಟ್ರಾಫಿಕ್ ಕಂಟ್ರೋಲ್ (ATC) ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನಿಯಂತ್ರಣ ಕೊಠಡಿಯಿಂದ ಎಟಿಸಿ ಟವರ್ ಮೇಲೆ ಅಪರಿಚಿತ ಹಾರುವ ವಸ್ತು ಕಾಣಿಸಿಕೊಂಡಿದೆ ಎಂದು ಕರೆ ಬಂದಿದೆ. ಎಟಿಸಿ ಟವರ್‌ನ ಟೆರೇಸ್‌ನಿಂದ ವಸ್ತುವು ಗೋಚರಿಸಿದೆ; ಏರ್‌ಲೈನ್ಸ್ […]