ರಕ್ತದಾನದಿಂದ ಜೀವದಾನ: ಡಾ.ಮಧುಸೂದನ್ ನಾಯಕ್

ಉಡುಪಿ, ಜೂನ್ 14: ಒಬ್ಬ ವ್ಯಕ್ತಿ ನೀಡಿದ ರಕ್ತದಿಂದ ಕನಿಷ್ಠ ನಾಲ್ಕು ಜೀವವನ್ನು ಉಳಿಸಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗುವುದಿಲ್ಲಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ಹೇಳಿದರು. ಅವರು ಶುಕ್ರವಾರ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಜಯಲಕ್ಷ್ಮೀ ಸಿಲ್ಕ್ಸ್, ಜಯಲಕ್ಷ್ಮೀ ಆರ್ಕೇಡ ಉದ್ಯಾವರ, ಟ್ರಿನಿಟಿ ಕೈಗಾರಿಕಾ ತರಬೇತಿ ಕೇಂದ್ರ ಜ್ಞಾನ ಸಾಧನಾ […]

ನೀತಿ ಸಂಹಿತೆ ಉಲ್ಲಂಘನೆ- ಉದ್ಯಾವರ ಜಯಲಕ್ಷ್ಮಿ ಟೆಕ್ಸ್ ಟೈಲ್ ಮೇಲೆ ದಾಳಿ

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಉಡುಪಿ ಉದ್ಯಾವರದ ಜಯಲಕ್ಷ್ಮಿ ಟೆಕ್ಸ್ ಟೈಲ್ ನಲ್ಲಿ ನರೇಂದ್ರ ಮೋದಿ ಚಿತ್ರವುಳ್ಳ ಸೀರೆಗಳನ್ನು, ಟೋಕನ್ ಮೂಲಕ ಸಾರ್ವಜನಿಕರಿಗೆ ವಿತರಿಸುತ್ತಿರುವ ಕುರಿತ ಖಚಿತ ದೂರು ಬಂದ ಹಿನ್ನಲೆಯಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಮದ್ಯಾಹ್ನ 4 ಗಂಟೆಯ ವೇಳೆಗೆ ಕಾಪು ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿತ್ತು. ಆದರೆ ಅಂಗಡಿ ಮಾಲೀಕರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ […]

ಬೈಕ್ ಅಪಘಾತ: ಸವಾರ ಸಾವು

ಉದ್ಯಾವರ ಹಾಲಿಮಾ ಸಾಬ್ಜು  ಹಾಲ್ ಎದುರು ಜ. 21ರಂದು ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಗಂಗೊಳ್ಳಿ ಮೊವಾಡಿ ನಿವಾಸಿ ಶಿವರಾಜ್(39) ಎಂದು ಗುರುತಿಸಲಾಗಿದೆ. ಬೈಕ್ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.