ಅಗಲಿದ ಪತ್ರಕರ್ತ ನಾಗೇಶ್ ಪಡು ಅವರಿಗೆ ಸಂಘದಿಂದ ನುಡಿ ನಮನ

ಮಂಗಳೂರು: ಡೆಂಗ್ಯೂ ಜ್ವರದಿಂದ ಭಾನುವಾರ ರಾತ್ರಿ ಸಾವನ್ನಪ್ಪಿದ ಖಾಸಗಿ ಸುದ್ದಿವಾಹಿನಿಯ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ವತಿಯಿಂದ ನಡೆದ ಸಭೆಯಲ್ಲಿ ಅಗಲಿದ ನಾಗೇಶ್ ಅವರಿಗೆ ಪತ್ರಕರ್ತರು ನುಡಿನಮನ ಸಲ್ಲಿಸಿದರು. ಮೌನಪ್ರಾರ್ಥನೆ ಸಲ್ಲಿಸಿ ಅಗಲಿದ ಆತ್ಮಕ್ಕೆ ಸದ್ಗತಿ ಕೋರಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ  ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಸದಾ […]

ದ.ಕ.ಜಿಲ್ಲೆ: ಮಂಗಳವಾರವೂ ‌ನಿರಂತರ ಮಳೆ, ವಿವಧೆಡೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರವೂ‌ ನಿರಂತರ ಮಳೆ ಸುರಿಯುತ್ತಿದ್ದು, ಮಳೆಯಿಂದ ಕೆಲವು ಹಾನಿ ಸಂಭವಿಸಿದೆ.   ಜಿಲ್ಲೆಯ ಮೂಡಬಿದಿರೆ, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ ಭಾಗಗಳಲ್ಲೂ ಉತ್ತಮ ಮಳೆಯಾಗುತ್ತಿದೆ. ಮಂಗಳೂರು ಅಲೋಶಿಯಸ್ ಕಾಲೇಜಿನ ರಸ್ತೆಯ ಪಕ್ಕದಲ್ಲಿ ಮಣ್ಣು ಕುಸಿದು ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ ಮಂಗಳೂರು ಹೊರವಲಯದ ಅದ್ಯಪಾಡಿಯಲ್ಲೂ ರಸ್ತೆಗೆ ಮಣ್ಣು ಕುಸಿದು ಕೆಲ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಬಸ್- ಲಾರಿ ಮುಖಾಮುಖಿ ಢಿಕ್ಕಿ ಹಲವರಿಗೆ ಗಾಯ, ಚಾಲಕರು ಗಂಭೀರ 

ಮಂಗಳೂರು: ಬಸ್-ಲಾರಿ‌ ಮುಖಾಮುಖಿ ಢಿಕ್ಕಿಯಾಗಿ‌ ಹಲವರು ಗಾಯಗೊಂಡಿರುವ ಘಟನೆ ಮೂಡಬಿದ್ರೆಯ ತೋಡಾರು ಮಸೀದಿ ಬಳಿ ಮಂಗಳವಾರ ಸಂಭವಿಸಿದೆ. ಬಸ್ ಮೂಡಬಿದಿರೆಯಿಂದ ಮಂಗಳೂರು ಕಡೆಗೆ ಹಾಗೂ ಲಾರಿ ಮಂಗಳೂರಿಂದ ಮೂಡಬಿದಿರೆ ಕಡೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಬಸ್ ಹಾಗೂ ಲಾರಿ ಚಾಲಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೊರತೆಗೆಯಲು ಹರಸಹಾಸ‌ ಪಡಬೇಕಾಯಿತು. ಅಲ್ಲದೇ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಹಿತ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಬಸ್ ಹಾಗೂ‌ ಲಾರಿಯ‌ ಮುಂಭಾಗ ಪೂರ್ಣ ಜಖಾಂ ಆಗಿವೆ. ಘಟನೆಯಿಂದ ಕೆಲ […]

ದ.ಕ ಜಿಲ್ಲೆಯಾದ್ಯಂತ ಉತ್ತಮ‌‌ ಮಳೆ: ಹಲವೆಡೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ  ಸೋಮವಾರವೂ ಭಾರೀ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ‌ ಕೆಲವೆಡೆ ಹಾನಿ ಸಂಭವಿಸಿದೆ. ಅಮ್ಮುಂಜೆ ಕಲಾಯಿ ಹೊಸನಗರದಲ್ಲಿ ಅಂಗಡಿ ಮೇಲೆ ಬಿದ್ದಿದ್ದು, ಸ್ಥಳೀಯರಿಂದ ಮರ ತೆರವು ಕಾರ್ಯಾಚರಣೆ ನಡೆಯಿತು. ಅಂಬ್ಲಮೊಗರುವಿನ ಮದಕ‌ ಗುಡ್ಡೆಯಲ್ಲಿ ಅಬ್ಬಾಸ್ ಮತ್ತು ರಝಾಕ್ ಎಂಬವರ ಮನೆಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಗುಡ್ಡ ಕುಸಿತಕ್ಕೆ ಧರೆಗುರುಳಿದ ವಿದ್ಯುತ್ ಕಂಬ. ಮನೆಯವರ ಸಮಯ ಪ್ರಜ್ನೆಯಿಂದ ಅನಾಹುತ ತಪ್ಪಿದಂತಾಗಿದೆ.   ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, […]

ಮಂಜೇಶ್ವರ: ಹಾಡಹಗಲೇ ವಿದ್ಯಾರ್ಥಿಯ ಅಪಹರಣ

ಮಂಗಳೂರು: ಹಾಡಹಗಲೇ ಕಾಲೇಜು ವಿದ್ಯಾರ್ಥಿಯನ್ನು ಅಪಹರಣ ನಡೆಸಿದಂತಹ ಘಟನೆ ಕಾಸರಗೋಡು ಮಂಜೇಶ್ವರದ ವರ್ಕಾಡಿಯ ಕಳಿಯೂರಲ್ಲಿ ಸೋಮವಾರ ನಡೆದಿದೆ. ಪಿಯುಸಿ ವಿದ್ಯಾರ್ಥಿ ಹಾರಿಸ್ (17) ಅಪಹರಣಕ್ಕೊಳಗಾದತ. ಕಾರಿನಲ್ಲಿ ಬಂದ ತಂಡ ಅಪಹರಣ ಮಾಡಿದೆ ಎಂದು ತಿಳಿದು ಬಂದಿದೆ. ಈತ ಮಂಗಳೂರಿನ ತೊಕ್ಕೊಟ್ಟಿನ ಖಾಸಗಿ ಕಾಲೇಜಿನ ಪಿಯು ವಿದ್ಯಾರ್ಥಿಯಾಗಿದ್ದು, ಹಾರಿಸ್ ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ. ಕೋಳಿಯೂರು ಪದವಿನ ಆಡಿಟೋರಿಯಂ ಬಳಿ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಅಪಹರಣ ನಡೆಸಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗಾಗಿ […]