ಶಾಲಾ‌ ಮಕ್ಕಳ ಚಾಲಕರ ಸಂಘದಿಂದ ಸ್ವಚ್ಚತಾ ಕಾರ್ಯ

ಮಂಗಳೂರು: ದ.ಕ.ಜಿಲ್ಲಾ ಶಾಲಾ ಮಕ್ಕಳ ಚಾಲಕರ ಸಂಘ ಮಂಗಳೂರು ಇದರ ವತಿಯಿಂದ ಕೋಡಿಕಲ್ ಕ್ರಾಸ್‌ ಬಳಿ ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ವಚ್ಚತಾ ಕಾರ್ಯಕ್ರಮ‌ ನಡೆಯಿತು. ಹಲವು ಸಮಯದಿಂದ ಕೆಸರು ತುಂಬಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಇದನ್ನು ಗಮನಿಸಿ ಸಂಘದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಜರುಗಿತು. ರಸ್ತೆಯ ಬದಿಯಲ್ಲಿದ್ದ ಕೆಸರು, ಕಸವನ್ನು ಸ್ವಚ್ಛ ಗೊಳಿಸಲಾಯಿತು. ಸಂಘದ ಪದಾಧಿಕಾರಿಗಳಾದ ಮೋಹನ್ ಅತ್ತಾವರ, ಕುಮಾರ್ ಮಾಲೆಮಾರ್, ಕಿರಣ್ ಲೇಡಿಹಿಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಸತೀಶ್ ಪೂಜಾರಿ, ಶಂಕರ್ ಶೆಟ್ಟಿ, […]

ಉಪ್ಪಿನಂಗಡಿ: ಐವರು ಅತ್ಯಾಚಾರ ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಬಂಧಿಸಲಾಗಿದೆ. 5 ಮಂದಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಚಂದ್ರಾಕ್ಷ, ಸಂದೀಪ್ ಕುಮಾರ್, ಹರ್ಷ ಯಾನೆ ರವಿ, ಲವ ಕುಮಾರ್ ಯಾನೆ ಲವ ಹಾಗೂ ಲಕ್ಷ್ಮೀಶ ಯಾನೆ ಚರಣ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿ ಚಂದ್ರಾಕ್ಷ ಎಂಬಾತನ ಮೇಲೆ ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. […]

ಆನ್ಲೈನ್ ಆರ್ಡರ್: ಬ್ರಹ್ಮಾವರ ವ್ಯಕ್ತಿಯಿಂದ 87 ಸಾವಿರ ಮೋಸ

ಉಡುಪಿ: ಬ್ರಹ್ಮಾವರದ ಕುಂಜಾಲು ನಿವಾಸಿ ದಿನೇಶ್ ದೇವಳಿ ಎಂಬವರು ಇ-ಮೇಲ್ ನೆಟ್‌ನಿಂದ 1799 ರೂ., ಮೌಲ್ಯದ ಬ್ಲೂಟೂಥ್ ಸ್ಪೀಕರ್ ಆರ್ಡರ್ ಮಾಡಿದ್ದು,  ಪಾರ್ಸೆಲ್ ತೆರೆದು ನೋಡಿದಾಗ ಇನ್ನೊಂದು ಕಂಪೆನಿಯ ಬ್ಲುಟೂತ್ ಸ್ಪೀಕರ್ ಕಳಿಸಿಕೊಡಲಾಗಿದ್ದು, ಈ ಬಗ್ಗೆ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ತಪ್ಪಾಗಿದೆ ಹಣ ವಾಪಾಸ್ಸು ಮಾಡುವುದಾಗಿ ಆನ್ಲೈನ್ ಸಂಸ್ಥೆ ಹೇಳಿ ದಿನೇಶ ದೇವಳಿ ಇವರ ಮೊಬೈಲಿಗೆ ಒಂದು ಸಂದೇಶ ಕಳುಹಿಸಿದೆ. ಆನ್ಲೈನ್ ಕಂಪೆನಿ ಆ ಸಂದೇಶವನ್ನು ಇನ್ನೊಂದು ಮೊಬೈಲ್ ನಂಬರ್‌ಗೆ ಫಾರ್ವಡ್ ಮಾಡಲು ತಿಳಿಸಿದ್ದು, ಹಾಗೆ […]

ವಿಶ್ವಾಸ ಮತಕ್ಕೆ ಸೋಲು: ರಾಜ್ಯದಲ್ಲಿ ಮೈತ್ರಿ ಸರಕಾರ ಪತನ

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಜಂಗಿ ಕುಸ್ತಿಗೆ ಕಾರಣವಾಗಿದ್ದ ವಿಧಾನ ಸಭೆಯಲ್ಲಿ ಕೊನೆಗೂ ಮಂಗಳವಾರ ಸಂಜೆ ವಿಶ್ವಾಸ ಮತ ಪರ ವಿರುದ್ಧ ನಡೆದ ಚರ್ಚೆ ಬಳಿಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಮ್ಮಿಶ್ರ ಸರಕಾರಕ್ಕೆ ಸೋಲಾಗಿದ್ದು, ಕುಮಾರ ಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಪತನಗೊಂಡಿದೆ. ಆ ಮೂಲಕ ದೋಸ್ತಿ ಸರಕಾರ ಒಂದು‌ ವರ್ಷದ ಆಡಳಿತ ಕೊನೆಗೊಂಡಿದೆ.‌ ವಿಶ್ವಾಸ ಮತದಾನದ ಚರ್ಚೆಯ ಸಂದರ್ಭ ಒಂದು ಹಂತದಲ್ಲಿ ಸಿಎಂ ತಾನು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಆದರೆ ಕೊನೆಗೆ […]

ನಮ್ಮ ಸಂಸ್ಕೃತಿ-ಪರಂಪರೆ ಮುಂದಿನ ‌ತಲೆಮಾರಿಗೆ ತಿಳಿಸಲು ಮಾಧ್ಯಮ ಸಂಪರ್ಕ ಸೇತುವೆ: ಪ್ರಕಾಶ್ ಇಳಂತಿಲ

ಮಂಗಳೂರು: ಧನಾತ್ಮಕ ದೃಷ್ಟಿಕೋನದ ಪತ್ರಿಕೋದ್ಯಮದಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ. ನಮ್ಮ ಸಂಸ್ಕೃತಿ, ಪರಂಪರೆಯ ‌ನೆಲೆಗಟ್ಟನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಮಾಧ್ಯಮಗಳು ಸೇತುವೆಯಾಗಿ ಕಾರ್ಯ ನಿರ್ವಹಿಸುತಿವೆ ಎಂದು ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಹೇಳಿದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಮಾಧ್ಯಮ ಮತ್ತು ಪ್ರಚಲಿತ ವಿದ್ಯಮಾನ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.  ಸ್ವಾತಂತ್ರ್ಯವನ್ನೂ ಪ್ರಜಾಪ್ರಭುತ್ವವನ್ನೂ ಜನರು ಸರಿಯಾಗಿ […]