‘ಸಕಾಲ’ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

ಉಡುಪಿ, ಅಗಸ್ಟ್ 2: ಸರಕಾರದ ವಿವಿಧ ಇಲಾಖೆಗಳು ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸೇವೆಗಳು ಸೇರಿದಂತೆ, ಒಟ್ಟು 960 ಸೇವೆಗಳನ್ನು ಒಳಗೊಂಡ ಸಕಾಲ ಸೇವೆಯ ಅನುಷ್ಠಾನದ ಪ್ರಗತಿ ಕುರಿತು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸೋಮವಾರ ವಿವಿಧ ಜಿಲ್ಲಾಡಳಿತಗಳೊಂದಿಗೆ, ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಸಕಾಲ ನೋಡೆಲ್ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಕಾಲ ಅರ್ಜಿಗಳ ತ್ವರಿತ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಕಾಲ ಸೇವೆಗಳಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಅರ್ಜಿಗಳ […]

ಖಾಸಗಿಯಾಗಿ ನಡೆಯುತ್ತಿರುವ ಪಿ.ಜಿ.ಗಳ ಮಾಹಿತಿ ನೀಡುವಂತೆ ಸೂಚನೆ

ಉಡುಪಿ, ಆಗಸ್ಟ್ 1: ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ವಾಸ್ತವ್ಯ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿಯಾಗಿ ನಡೆಸುತ್ತಿರುವ ಮಹಿಳೆಯರ ಮತ್ತು ಮಕ್ಕಳ ಹಾಸ್ಟೆಲ್/ಪೇಯಿಂಗ್ ಗೆಸ್ಟ್(ಪಿ.ಜಿ.)ಗಳ ಮಾಹಿತಿಯನ್ನು, ಸಂಬಂಧಿತ ವ್ಯಕ್ತಿ/ಸಂಸ್ಥೆಗಳು ನಿಗದಿತ ನಮೂನೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಗಸ್ಟ್ 31 ರೊಳಗಾಗಿ ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ, ಮಣಿಪಾಲ, ದೂರವಾಣಿ ಸಂಖ್ಯೆ: […]

ನೆಲ, ಜಲ, ಅರಣ್ಯ ಪರಿಸರ ಚಿತ್ರ ಬರಹ ಸ್ಪರ್ಧೆ

ಉಡುಪಿ, ಜುಲೈ 29: ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಡುಪಿ ಘಟಕ ಆಯೋಜಿಸಿಕೊಂಡಿರುವ “ನೀರು ಆರುವ ಮುನ್ನ” ನೆಲ, ಜಲ, ಅರಣ್ಯ ಸಮೃದ್ಧಿ, ಸಿದ್ಧಿ ಸಂಕಲ್ಪದ ಜಾಗೃತಿ ಮತ್ತು ಅರಿವು ಕಾರ್ಯಕ್ರಮಕ್ಕೆ ಪೂರಕವಾಗಿ ಚಿತ್ರ ಬರಹ ಸ್ಪರ್ಧೆಯನ್ನು ಉಡುಪಿ ಜಿಲ್ಲೆಯ ಸಾರ್ವಜನಿಕರಿಗಾಗಿ ಆಯೋಜಿಸಿದೆ. ನಿಮ್ಮ ಪರಿಸರದಲ್ಲಿ ನೆಲ ಜಲ ಅರಣ್ಯ ಪರಿಸರಕ್ಕಾಗಿ ನೀವು, ನಿಮ್ಮ ನೆರೆಹೊರೆಯವರು ಏನು ಮಾದರಿ ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ಚುಟುಕಾಗಿ ಬರೆದು ಕಳುಹಿಸಬೇಕು. ಜೊತೆಯಲ್ಲಿ ವಿಚಾರಕ್ಕೆ […]

ಬಸವಣ್ಣರ ಸಂದೇಶ ಜನತೆಗೆ ತಲುಪಿಸಲು ಸಂಕಲ್ಪ, ಬೆಂಬಲ ಅಗತ್ಯ: ಜಿ. ರಾಜಶೇಖರ್‌

ಉಡುಪಿ: ಬಸವಣ್ಣನವರು ‌ಹನ್ನೆರಡನೇ ಶತಮಾನದಲ್ಲಿ ಪ್ರವಾಹ, ಪ್ರವೃತಿ ಹಾಗೂ‌ ಬಹುಜನರ ಸಂಕಲ್ಪದ ವಿರುದ್ಧ ಈಜಿ ಅಸಮಾನತೆಯ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದರು. ಇಂದು ಸಾಣೆಹಳ್ಳಿ ಸ್ವಾಮೀಜಿ ಕಾಲದ ಪ್ರವಾಹದ ವಿರುದ್ಧ ಈಜಲು ಹೊರಟಿದ್ದು, ಆ ಮೂಲಕ ಬಸವಣ್ಣರ ಸಂದೇಶಗಳನ್ನು ಜನರಿಗೆ ಮುಟ್ಟಿಸಲು ಸಂಕಲ್ಪಿಸಿದ್ದಾರೆ. ಅವರಿಗೆ ನಾವೆಲ್ಲ ಬೆಂಬಲ ನೀಡಬೇಕಾಗಿದೆ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್‌ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆ ಮತ್ತು ಉಡುಪಿ ಬಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ […]

ಗಾಂಜಾ ಎಳೆಯುತಿದ್ದ ಆರು ಯುವಕರು ಅರೆಸ್ಟ್

ಉಡುಪಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಎಳೆಯುತಿದ್ದ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನಾರಯಣ ಗುರು ಮಂದಿರದ ಹಿಂಭಾಗದ ನಿವಾಸಿ ಚೇತನ್ (26), ಕೊಳಲಗಿರಿ ಚಕ್ಕುಲಿಕಟ್ಟೆ ನಿವಾಸಿ ಪವಡಪ್ಪ ನಿ.ಬಿಳಗಲ್ (25),ಅಲೆವೂರು ನಿವಾಸಿ ಸತೀಶ್.ಎಸ್(32), ಕಲ್ಮಾಡಿ ನಿವಾಸಿ ದೀಕ್ಷಿತ್ ಪೂಜಾರಿ (28), ಅಜ್ಜರಕಾಡು ಡಿಸಿ ಆಫಿಸ್ ಕ್ವಾಟರ್ಸ್ ನಿವಾಸಿ ಪುನೀತ್(18), ಯತೀಶ್(19) ಬಂಧಿತ ಆರೋಪಿಗಳು. ಆರು ಮಂದಿಯನ್ನು ಮಣಿಪಾಲ ಕೆಎಂಸಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ವಿವಿಧ […]