ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ..!

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಹೊರಜಾರಿದ್ದು, ಭಾರೀ ದುರಂತವೊಂದು ತಪ್ಪಿದಂತಾಗಿದೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ – 380 ವಿಮಾನ ಪೈಲಟ್ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲಿ ಅನಾಹುತ ತಪ್ಪಿದೆ. ದುಬೈನಿಂದ 181 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ವಿಮಾನ ಸಂಜೆ 5.20ಕ್ಕೆ ಮಂಗಳೂರು ಬಜಪೆಯ ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ. ಪೈಲೆಟ್ ಸಮಯಪ್ರಜ್ಞೆಯಿಂದ ಯಾವುದೇ ತೊಂದರೆ ಉಂಟಾಗಿಲ್ಲ.
ಉಡುಪಿ: ಪುಣ್ಯಕೋಟಿ ಗೋಸೇವಾ ಬಳಗದಿಂದ 46ನೇ ಗೋಪೂಜೆ

ಉಡುಪಿ, ಜೂ. 28: ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋಸೇವಾ ಬಳಗದ 46ನೇ ತಿಂಗಳ ಗೋಪೂಜೆಯು ಶುಕ್ರವಾರ ಬೈಲೂರಿನ ಬಿ.ಎಂ.ಎಂ.ಶಾಲೆಯ ಸಮೀಪದ ನಿವಾಸಿ ಗೋಪಾಲಕೃಷ್ಣ ರಾವ್ ಅವರ ಮನೆಯಲ್ಲಿ ನಡೆಯಿತು. ಬಳಗದ ಸದಸ್ಯರು ಮತ್ತು ಮನೆಯವರು ಸೇರಿ ಗೋವುಗಳಿಗೆ ನವಧಾನ್ಯವನ್ನು ತಿನ್ನಿಸಿ, ಆರತಿ ಬೆಳಗಿಸಿ ಗೋಪೂಜೆಯನ್ನು ನೆರವೇರಿಸಿದರು. ಬಳಗದ ವತಿಯಿಂದ ಗೋಪಾಲಕರಿಗೆ ಪಶುಆಹಾರ ಹಾಗೂ ಗೋಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗೋಪಾಲಕರಾದ ಸಂಧ್ಯಾ ಗೋಪಾಲಕೃಷ್ಣ ರಾವ್, ಬೇಬಿ ರಾವ್, ರಂಜಿತ್ ರಾವ್, ರಜತ್ ರಾವ್ ಉಪಸ್ಥಿತರಿದ್ದರು, ಗೋಸೇವಾ ಬಳಗದ […]
ಕಟಪಾಡಿ: ಸಾರ್ವಜನಿಕ ಸ್ಥಳದ ತ್ಯಾಜ್ಯ ರಾಶಿಗೆ ಎಂದು ಮುಕ್ತಿ?.. ಸ್ವಚ್ಛತೆಯ ಜವಾಬ್ದಾರಿ ಮರೆತರೇ ಜನತೆ…

ಉಡುಪಿ: ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಚಾಕಡಿ ರೈಲ್ವೆ ಬ್ರಿಡ್ಜ್ ಬಳಿಯ ಈಶ್ವರ ದೇವಸ್ಥಾನದ ( ಸುಭಾಷ್ ನಗರ ಮತ್ತು ಕಟಪಾಡಿ ರಸ್ತೆ ) ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲೇ ತ್ಯಾಜ್ಯ ರಾಶಿ ಹಾಕಲಾಗುತ್ತಿದ್ದು, ಇದರಿಂದಾಗಿ ಸ್ಥಳೀಯರು, ಸಾರ್ವಜನಿಕರಿಗೆ ಭಾರಿ ಸಮಸ್ಯೆ ಎದುರಾಗಿದೆ. ಕಳೆದ ಹಲವು ಸಮಯದಿಂದ ಈ ತ್ಯಾಜ್ಯ ರಾಶಿ ಇಲ್ಲಿದ್ದು, ಇದೀಗ ಮಳೆಗೆ ಮತ್ತಷ್ಟು ಸಮಸ್ಯೆ ಉದ್ಬವಾಗುತ್ತಿದೆ. ಬೇರೆ ಭಾಗಗಳಿಂದ ಕಸ ತ್ಯಾಜ್ಯಗಳನ್ನು ತಂದು ಯಾರೋ ಸಾರ್ವಜನಿಕರೇ ಈ ಪ್ರದೇಶದಲ್ಲಿ ಹಾಕುತ್ತಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಗಳ ತ್ಯಾಜ್ಯ, […]
ಮಂಗಳೂರು: ಪ್ರೇಮ ಸಲ್ಲಾಪದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಆರೋಪಿ ಬಂಧನ

ಮಂಗಳೂರು: ಜೂ. 26: ಯುವತಯೊಬ್ಬಳ ಜತೆಗೆ ವ್ಯಕ್ತಿಯೋರ್ವ ಪ್ರೇಮ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣಾ ಪೊಲೀಸರು ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಯುವತಿಯೋರ್ವಳ ಜತೆ ನಗ್ನವಾಗಿ ಪ್ರೇಮ ಸಲ್ಲಾಪವಾಡುವ ವೀಡಿಯೋ ವ್ಯಾಟ್ಸ್ ಅಪ್ ಮೂಲಕ ಹರಿದಾಡುತ್ತಿತ್ತು. ಈ ಬಗ್ಗೆ ಸ್ಥಳೀಯ ಸಂಘಟನೆ ನೀಡಿದ ದೂರಿನಂತೆ ಪೊಲೀಸರು ಕೆಲವೇ ಕ್ಷಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ […]
ನಿಫಾ ವೈರಸ್ ಭಯ ಬೇಡ, ಎಚ್ಚರವಿರಲಿ: ಡಾ.ವಾಸುದೇವ

ಉಡುಪಿ, ಜೂನ್ 11: ನಿಫಾ ವೈರಸ್ ಕುರಿತಂತೆ ಜಿಲ್ಲೆಯ ಜನತೆ ಯಾವುದೇ ರೀತಿ ಆತಂಕ ಪಡುವ ಅಗತ್ಯ ಇಲ್ಲ. ಜ್ವರ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಅವರು ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿಯ ಅಂತರ್ ಇಲಾಖಾ ಸಮನ್ವಯ ಸಮಿತಿ […]