ಉಡುಪಿ: ರಾಜ್ಯಮಟ್ಟದ ವಕೀಲರ ವಾಲಿಬಾಲ್‌ ಹಾಗೂ ತ್ರೋಬಾಲ್‌ ಟೂರ್ನ್‌ಮೆಂಟ್‌ಗೆ ಚಾಲನೆ

ಉಡುಪಿ: ವಕೀಲರು ಮೈದಾನದಲ್ಲಿ ಮಾತ್ರವಲ್ಲ, ವೃತ್ತಿ ಜೀವನದಲ್ಲಿಯೂ ಕ್ರೀಡಾ ಸ್ಫೂರ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಎಸ್‌. ಅಬ್ದುಲ್‌ ನಜೀರ್‌ ಹೇಳಿದರು. ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಉಡುಪಿ ಕೋರ್ಟ್‌ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ವಕೀಲರ ವಾಲಿಬಾಲ್‌ ಹಾಗೂ ತ್ರೋಬಾಲ್‌ ಟೂರ್ನ್‌ಮೆಂಟ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ವಕೀಲರು ಶುಲ್ಕ ಪಡೆದುಕೊಳ್ಳುವುದು ಸೋಲು–ಗೆಲುವಿಗಾಗಿ ಅಲ್ಲ, ಕಕ್ಷಿದಾರನ ಪರವಾಗಿ ವಾದಮಂಡನೆ ಮಾಡಿದಗೋಸ್ಕರ. ವಕೀಲರು ಜನರಿಗೆ ಉತ್ತಮ ಕಾನೂನು ಸಲಹೆಗಳನ್ನು ನೀಡುವ ಕೆಲಸ ಮಾಡಬೇಕು ಎಂದರು. […]