ನಾಪತ್ತೆಯಾಗಿರುವ ಏಳು ಮೀನುಗಾರರ ಪೈಕಿ ಇಬ್ಬರ ಮೊಬೈಲ್ ರಿಂಗ್ ಆಯಿತು!

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 46 ದಿನಗಳು ಕಳೆದಿದ್ದು, ಈ ಮಧ್ಯೆ ಎರಡು ಮೀನುಗಾರರ ಮೊಬೈಲ್ ರಿಂಗ್ ಆಗಿದೆ ಎಂಬ ಸುದ್ದಿಕೇಳಿ ಬಂದಿದೆ. ಹೌದು, ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಪೈಕಿ ಉತ್ತರ ಕನ್ನಡ ಜಿಲ್ಲೆಯ ರವಿ ಮಂಕಿ ಹಾಗೂ ಲಕ್ಷಣ್ ಎಂಬುವ ಮೀನುಗಾರರ ಮೊಬೈಲ್ ಎರಡು ಬಾರಿ ರಿಂಗ್ ಆಗಿದೆ ಎಂದು ಮನೆಯವರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. […]